Wednesday, October 6, 2010

ವರ್ಣ ಪಲ್ಲಟದ ಅನರ್ಥ !!


ಇದನ್ನ ಹೆಂಗ್ರಿ ಓದೋದು ? ಸ್ಟುಡಿಯೋ ಅಂತ ಬರ್ದಿದ್ದನ್ನ ಓದೋಕೆ ಜನ ಕಷ್ಟ ಪಡ್ತಾರೆ.. ಇದು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಇರುವ ಲ್ಯಾಕ್ಮೆ ಸ್ಟುಡಿಯೋ ಮುಂದಿರುವ ಫಲಕ.
ಅಂದಹಾಗೆ, ಈ ಅಂಗಡಿಯವರನ್ನು ಸಂಪರ್ಕಿಸಿದೆ. ತಪ್ಪಾಗಿ ಬರೆದಿದ್ದೀರ ಅಂತ ಕೂಡ ಹೇಳಿದೆ. ಅಲ್ಲಿ ಕೆಲಸ ಮಾಡುವ ಸ್ವಾಗತಕಾರಿಣಿ ತಮ್ಮ ಮೇಲಿನ ಅಧಿಕಾರಿಯನ್ನು ಸಂಪರ್ಕಿಸಿ ಇದರ ಬಗ್ಗೆ ತಿಳಿಸುವುದಾಗಿ ಹೇಳಿದರು. ಆದರೆ ಇದನ್ನು ಸರಿಪಡಿಸುವದರ ಬಗ್ಗೆ ಇನ್ನು ತಿಳಿದು ಬಂದಿಲ್ಲ. ಮತ್ತೊಮ್ಮೆ ಕೇಳಿ ನೋಡ್ತೀನಿ.

ನಿಸ್ತೇಜ ಸ್ಟೇಡಿಯಂ

ಇವರಿಗೆ ಆಂಗ್ಲಭಾಷೆ ಹುಟ್ಟಿನಿಂದಲೇ ಬಂದಿರುವ ಹಾಗಿದೆ... ಕನ್ನಡ ಮಾತ್ರ ಯಾಕೋ ತಕರಾರು ಮಾಡ್ತಾ ಇದೆ.. ಇಷ್ಟೊಂದು ನಿಸ್ತೇಜವಾದ ಚಿನ್ನಸ್ವಾಮಿ ಸ್ಟೇಡಿಯಂ ನೋಡಿದ್ದೀರಾ ? ತಮಾಷೆ ಎಂದರೆ ಈ ಮೈದಾನದ ಮುಂದೆ ಮೂರು ಕಡೆ ಇದೇ ರೀತಿ ಬರೆದಿದ್ದಾರೆ ! ಈ ಮೈದಾನದ ಅಧಿಕಾರಿಗಳಿಗೆ ಇಷ್ಟೂ ಕನ್ನಡ ಬರೋದಿಲ್ಲವೇ ??

ಆಸ್ಫತ್ರೆ !


ಮೊದಲು ಈ ಫಲಕ ಬರೆದವರನ್ನು ಪಕ್ಕದ ಹುಚ್ಚಾಸ್ಪತ್ರೆಗೆ ಸೇರಿಸಿ... ಪ ಮತ್ತು ಫ ಅಕ್ಷರಗಳ ನಡುವೆ ವ್ಯತ್ಯಾಸ ತಿಳಿಯದವರು ಕನ್ನಡ ಬರೀಬಾರ್ದು ಕಣ್ರೀ !!

ಹಾಂಡಿಕಾಸ್ಪ್ ?


ಹಾಂಡಿಕಾಸ್ಪ್ athava ಹ್ಯಾಂಡಿಕ್ಯಾಪ್ದ್ ??
ಡಬ್ಬಲ್ ರೊಡ್ ಅಥವಾ ಡಬಲ್ ರೋಡ್

ಈ ಅಂಗಡಿಯ ಮಾಲಿಕರ ಜೊತೆ ಮಾತಾಡಿ ಕನ್ನಡ ತಪ್ಪಾಗಿ ಬರೆದಿದ್ದೀರ ಎಂದಾಗ ಸರಿ ಮಾಡಿಸುತ್ತೇನೆ ಎಂದರು. ಯಾವಾಗ ಎಂಬುದು ಖಚಿತವಿಲ್ಲ.

ನಿಧಾನವಾಗಿ.....


ನೀವು ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿ ಹೋಗುವಾಗ ಬೇರೆಯವರಿಂದ ಏನಾದರೂ ಚಲ್ಲಿಸಬೇಕಾದರೆ ನಿಧಾನವಾಗಿ ಚಲ್ಲಿಸಿ.. ಜೋರಾಗಿ ಚಲ್ಲಿಸಿದರೆ ಅಕ್ಕಪಕ್ಕದವರ ಮೇಲೆ ಬೀಳಬಹುದು.

ಜಾಸ್ತಿ ಮಾಡರ್ನ್ ಆಯ್ತು !


ಜಾಸ್ತಿ ಮಾಡರ್ನ್ ಆದ್ರೆ ಕಷ್ಟ ಸ್ವಾಮಿ ! ಮಾಡ್ರನ್ ಆಗಿಬಿಡತ್ತೆ ! ಯಾರ್ರಿ ಇವರಿಗೆಲ್ಲ ಕನ್ನಡ ಕಲಿಸಿದವರು !!??

ಯಾರ ರಸ್ತೆ ?


ಇದು ಮಲ್ಯ ಆಸ್ಪತ್ರೆಯ ಹತ್ತಿರ ಇರುವ ಬಸ್ ನಿಲ್ದಾಣದ ಮೇಲೆ ನಮ್ಮ ಕರ್ನಾಟಕ ಸರ್ಕಾರವೇ ಬರೆಸಿರುವ ಫಲಕ. ಆಸ್ಪತ್ರೆ, ರಸ್ತೆ ಮತ್ತು ಮಲ್ಯ ಪರಿವಾರದ ಹೆಸರು ಬದಲಾಯಿಸಬೇಕೋ ಅಥವಾ ಇದನ್ನು ಸರಿಪಡಿಸುವರೋ?