Wednesday, October 6, 2010

ವರ್ಣ ಪಲ್ಲಟದ ಅನರ್ಥ !!


ಇದನ್ನ ಹೆಂಗ್ರಿ ಓದೋದು ? ಸ್ಟುಡಿಯೋ ಅಂತ ಬರ್ದಿದ್ದನ್ನ ಓದೋಕೆ ಜನ ಕಷ್ಟ ಪಡ್ತಾರೆ.. ಇದು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಇರುವ ಲ್ಯಾಕ್ಮೆ ಸ್ಟುಡಿಯೋ ಮುಂದಿರುವ ಫಲಕ.
ಅಂದಹಾಗೆ, ಈ ಅಂಗಡಿಯವರನ್ನು ಸಂಪರ್ಕಿಸಿದೆ. ತಪ್ಪಾಗಿ ಬರೆದಿದ್ದೀರ ಅಂತ ಕೂಡ ಹೇಳಿದೆ. ಅಲ್ಲಿ ಕೆಲಸ ಮಾಡುವ ಸ್ವಾಗತಕಾರಿಣಿ ತಮ್ಮ ಮೇಲಿನ ಅಧಿಕಾರಿಯನ್ನು ಸಂಪರ್ಕಿಸಿ ಇದರ ಬಗ್ಗೆ ತಿಳಿಸುವುದಾಗಿ ಹೇಳಿದರು. ಆದರೆ ಇದನ್ನು ಸರಿಪಡಿಸುವದರ ಬಗ್ಗೆ ಇನ್ನು ತಿಳಿದು ಬಂದಿಲ್ಲ. ಮತ್ತೊಮ್ಮೆ ಕೇಳಿ ನೋಡ್ತೀನಿ.

ನಿಸ್ತೇಜ ಸ್ಟೇಡಿಯಂ

ಇವರಿಗೆ ಆಂಗ್ಲಭಾಷೆ ಹುಟ್ಟಿನಿಂದಲೇ ಬಂದಿರುವ ಹಾಗಿದೆ... ಕನ್ನಡ ಮಾತ್ರ ಯಾಕೋ ತಕರಾರು ಮಾಡ್ತಾ ಇದೆ.. ಇಷ್ಟೊಂದು ನಿಸ್ತೇಜವಾದ ಚಿನ್ನಸ್ವಾಮಿ ಸ್ಟೇಡಿಯಂ ನೋಡಿದ್ದೀರಾ ? ತಮಾಷೆ ಎಂದರೆ ಈ ಮೈದಾನದ ಮುಂದೆ ಮೂರು ಕಡೆ ಇದೇ ರೀತಿ ಬರೆದಿದ್ದಾರೆ ! ಈ ಮೈದಾನದ ಅಧಿಕಾರಿಗಳಿಗೆ ಇಷ್ಟೂ ಕನ್ನಡ ಬರೋದಿಲ್ಲವೇ ??

ಆಸ್ಫತ್ರೆ !


ಮೊದಲು ಈ ಫಲಕ ಬರೆದವರನ್ನು ಪಕ್ಕದ ಹುಚ್ಚಾಸ್ಪತ್ರೆಗೆ ಸೇರಿಸಿ... ಪ ಮತ್ತು ಫ ಅಕ್ಷರಗಳ ನಡುವೆ ವ್ಯತ್ಯಾಸ ತಿಳಿಯದವರು ಕನ್ನಡ ಬರೀಬಾರ್ದು ಕಣ್ರೀ !!

ಹಾಂಡಿಕಾಸ್ಪ್ ?


ಹಾಂಡಿಕಾಸ್ಪ್ athava ಹ್ಯಾಂಡಿಕ್ಯಾಪ್ದ್ ??
ಡಬ್ಬಲ್ ರೊಡ್ ಅಥವಾ ಡಬಲ್ ರೋಡ್

ಈ ಅಂಗಡಿಯ ಮಾಲಿಕರ ಜೊತೆ ಮಾತಾಡಿ ಕನ್ನಡ ತಪ್ಪಾಗಿ ಬರೆದಿದ್ದೀರ ಎಂದಾಗ ಸರಿ ಮಾಡಿಸುತ್ತೇನೆ ಎಂದರು. ಯಾವಾಗ ಎಂಬುದು ಖಚಿತವಿಲ್ಲ.

ನಿಧಾನವಾಗಿ.....


ನೀವು ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿ ಹೋಗುವಾಗ ಬೇರೆಯವರಿಂದ ಏನಾದರೂ ಚಲ್ಲಿಸಬೇಕಾದರೆ ನಿಧಾನವಾಗಿ ಚಲ್ಲಿಸಿ.. ಜೋರಾಗಿ ಚಲ್ಲಿಸಿದರೆ ಅಕ್ಕಪಕ್ಕದವರ ಮೇಲೆ ಬೀಳಬಹುದು.

ಜಾಸ್ತಿ ಮಾಡರ್ನ್ ಆಯ್ತು !


ಜಾಸ್ತಿ ಮಾಡರ್ನ್ ಆದ್ರೆ ಕಷ್ಟ ಸ್ವಾಮಿ ! ಮಾಡ್ರನ್ ಆಗಿಬಿಡತ್ತೆ ! ಯಾರ್ರಿ ಇವರಿಗೆಲ್ಲ ಕನ್ನಡ ಕಲಿಸಿದವರು !!??

ಯಾರ ರಸ್ತೆ ?


ಇದು ಮಲ್ಯ ಆಸ್ಪತ್ರೆಯ ಹತ್ತಿರ ಇರುವ ಬಸ್ ನಿಲ್ದಾಣದ ಮೇಲೆ ನಮ್ಮ ಕರ್ನಾಟಕ ಸರ್ಕಾರವೇ ಬರೆಸಿರುವ ಫಲಕ. ಆಸ್ಪತ್ರೆ, ರಸ್ತೆ ಮತ್ತು ಮಲ್ಯ ಪರಿವಾರದ ಹೆಸರು ಬದಲಾಯಿಸಬೇಕೋ ಅಥವಾ ಇದನ್ನು ಸರಿಪಡಿಸುವರೋ?

ಏನು ಹಿಡಿಯಬಾರದು ?


ದಯವಿಟ್ಟು ಇಲ್ಲಿ "ಮೀನು" ಹಿಡಿಯಬೇಡಿ !!

ಅದೆಷ್ಟು ಅಪಾಯಕಾರಿ ?


ನದಿಯಲ್ಲಿ ಈಜುವುದು ಸರಿ, ನಾದಿಯಲ್ಲಿ ?
ಈಜುವಾದ್ದು ?
ತುಂಬಾ ಅಪಾಯಕಾರಿ = ಅಪ್ಪಯಕರಿ !!
(ಅಥವಾ ಈ ನದಿಯಲ್ಲಿ ಈಜುವುದು ಅಪ್ಪಯ್ಯನ ಆನೆ (ಕರಿ) ಎಂದು ಹೇಳುತ್ತಿದ್ದಾರೋ ?)

ದಾರಿ ಯಾವುದಯ್ಯ ???


ಹಾಗಾದರೆ ದಕ್ಷಿಣ ಭಾರತದ ತಿಂಡಿಗಳು ಹೋಗುವ ದಾರಿ ಯಾವುದು ? ಅಥವಾ ಅವುಗಳಿಗೆ ಇಲ್ಲಿ ಪ್ರವೇಶ ಇಲ್ಲವೇ ??

Wednesday, September 22, 2010

ಬಹಿರಂಗ ಶುದ್ಧಿ !


ಅಂದರೆ ಕದ್ದು ಮುಚ್ಚಿ ಮದ್ಯಪಾನ ಮಾಡಬಹುದು ಎಂದು ಬಹಿರಂಗವಾಗೇ ಹೇಳುತ್ತಿದ್ದರೆಯೇ ?

ಕಗ್ಗೊಲೆ !!!


ಇದು ಎಲ್ಲಕ್ಕಿಂತ ದೊಡ್ಡ ಅವಮಾನ.. ಈ ರೋಹಿಣಿ ಪಬ್ಲಿಕೇಷನ್ಸ್ ಅವರಿಗೆ ತಲೆ ಇದೆಯಾ ?!ಇವರಿಗೆ ಕನ್ನಡವೇ ಬಾರದಿರುವಾಗ ಕನ್ನಡದ ಮೂಲಕ ತೆಲುಗು !!! ಇಂಥ ಪುಸ್ತಕಗಳು ಕರ್ನಾಟಕದಲ್ಲಿ ಬಿಡುಗಡೆ ಮಾಡಿದವರು ಯಾರು ?? ಆ ವಿತರಕರನ್ನು ಕರ್ನಾಟಕದಿಂದ ಹೊರಗೆ ತಳ್ಳಿ...

ಕನ್ನಡ ಗೋವಿಂದ ಗೋವಿಂದಾ!!


ತಿರುಪತಿ ತಿರುಮಲ ದೇವಸ್ಥಾನದವರ ಅಮೃತ ಹಸ್ತದಿಂದ ಕನ್ನಡದ ಕೊಲೆ ! ಗೋವಿಂದಾ ಗೋವಿಂದ !!

ದೀರ್ಘ ಬಾಳಿಕೆ !!


ಯಾರ ದೀರ್ಘ ಬಾಳಿಕೆ ಅನ್ನುವುದನ್ನು ತಿಳಿಸಿದ್ದಾರೆ ಒಳ್ಳೆಯದಿತ್ತು ! ಆದರೂ ಈ ಚಿತ್ರ ಸೆರೆಹಿಡಿದವರು ಈ ಸಮಯಕ್ಕೆ ಅಲ್ಲಿಗೆ ಬಂದದ್ದೇ ವಿಚಿತ್ರ !

ಮಂಜೂರಿ !


ಸರ್ಕಾರದಿಂದ ಮಂಜೂರಾಗದ ಕೆಲವು ಆಹಾರ ಪದಾರ್ಥಗಳು !! ಅಂಥವನ್ನು ದಯವಿಟ್ಟು ಇಲ್ಲಿ ಮಂಜೂರಿ ಮಾಡಲಾಗುತ್ತವೆ !

ಇದೇನು ನವ್ಯ ಕಲೆಯೇ ??!!


ಇಲ್ಲೊಬ್ಬ ಚಿತ್ರಕಾರನ ನವ್ಯ ಕಲೆ ನೋಡ್ರಪ್ಪ !! ಆಟಸ !! ಹಾ ಹಾ ಹಾ !!

ತಪ್ಪಿಗೆ ಸರಿಯಾದ ಶಿಕ್ಷೆ !!


ಆಹಾ.... ಇದೆಂಥ ಶಿಕ್ಷೆ !! ಇಲ್ಲಿ ಪಾರ್ಕಿಂಗ್ ಮಾಡಿದವರಿಗೇ ಏರ್ ಬಿಡ್ತಾರೆ !!

Friday, July 23, 2010

ಅನುಮಾನ ತುಂಬಾ ಕೆಟ್ಟದ್ದು ಕಣ್ರೀ !

ಆದ್ದರಿಂದ ಈ ಅಶ್ವತ್ಥ ವೃಕ್ಷದ ಎದುರು ಮೂತ್ರವನ್ನು ಶಂಕಿಸಬಾರದು ! ಹಾಗೇನಾದರೂ ಶಂಕೆ ಬಂದರೆ ಯಾವುದಾದರೂ ಪೆಥಾಲಜಿ ಲ್ಯಾಬ್ ಅವರ ಸಹಾಯ ತೆಗೆದುಕೊಳ್ಳಿರಿ..


ಚಲಿಸಬೇಡಿ

ಇದು ನಮ್ಮ ಕರ್ನಾಟಕ ಸರ್ಕಾರ ಬರೆಸಿರುವ ಸೂಚನೆ ! ಕನ್ನಡ ಪಂಡಿತರು ದಯವಿಟ್ಟು ಇದರ ವಾಕ್ಯ ರಚನೆಯನ್ನು ಕ್ಷಮಿಸಬೇಕು !
ಪಾನ ಅಂದರೇನೆ ಸೇವಿಸುವುದು.. ಮತ್ತೆ ಮದ್ಯಪಾನ ಸೇವಿಸಿ ಅಂದರೆ ಏನರ್ಥ ?
ಚಲಿಸಬೇಡಿ ಅಂದರೆ ನಾವು ಚಲಿಸುವುದು ಬೇಡ ಎಂದು ಅರ್ಥ.. ಹಾಗಾದರೆ ವಾಹನ ನಡೆಸಬಹುದೇ ?

ವಾಹನ ಚಲಿಸಬೇಡಿ ಎಂದರೆ ನನಗಂತೂ ತಮಾಷೆಯ ವಿಷಯವೇ ! ವಾಹನ ಎಲ್ಲ್ರಿ ಎಣ್ಣೆ ಹೊಡೆಯತ್ತೆ !


ಮೇಕರ್ಸ್ !!

ಕಾರ್ ಕೀ ಮೇಕರ್ಸ್ ! ಅಥವಾ ಕಾರಿನ ಕೀಯನ್ನು ಮೆಕ್ಕುವವರು !!


ಸವತಿ ಬೇಕೇ ?

ಮದುವೆ ಮಾಡಿಕೊಳ್ಳಲು ವರ ಬೇಕಾದ್ರೆ ಬೇಕಾದಷ್ಟು ದಾರಿಗಳಿವೆ. ಆದರೆ ಸವತಿಯೇ ಬೇಕು ಅಂದ್ರೆ ? ಇಲ್ಲಿದೆ ಆ ಹೋಟೆಲ್.. ಊಟ ದೊರಕುತ್ತದೆ.. ವಸತಿ ಇಲ್ಲ.. ಆದರೆ ಸವತಿ ಅಂತೂ ಖಂಡಿತ ಸಿಗ್ತಾಳೆ...

ಸವತಿ ಇಷ್ಟು ಸುಲಭವಾಗಿ ಸಿಗ್ತಾಳೆ ! ಎಂಥ ಅದ್ಭುತ ವ್ಯಾಪಾರ ??!!

ಕನ್ನಡದ ಹೆಣ್ಣುಮಕ್ಕಳೇ.. ಇಲ್ಲಿಗೆ ನಿಮ್ಮ ಪತಿಯನ್ನು ಮಾತ್ರ ಕರೆತರಬೇಡಿ ! ಇಲ್ಲವಾದರೆ ನಿಮಗೆ ಸವತಿ ಕಾಟ ತಪ್ಪಿದ್ದಲ್ಲ !

ಪಾರ್ಕಿಂಗ್ !

ನಮ್ಮ ಪ್ರಾರಬ್ಧ ! ದೇವರಲ್ಲಿ ನನ್ನ ಪ್ರಾರ್ಥನೆ ಇಷ್ಟೇ.. ಇಲ್ಲಿ ಮಾತ್ರ ಪಾರ್ಕಿಂಗ್ ಮಾಡದಂತೆ ನನ್ನನ್ನು ಉಳಿಸಲಿ...



ಅತೀ ಆಯ್ತು !

ಇದಂತೂ ತೀರ ಆಯ್ತು ಕಣ್ರೀ ! ಬರೆಯಕ್ಕೆ ಬರಲ್ಲ ಅಂದ್ರೆ ಯಾರನ್ನಾದರು ಕೇಳೋದಲ್ವೆ ?!



ಕೋಳಿ ಮತ್ತು ಮೊಟ್ಟೆ !


ಸೊಳ್ಳೆ ಮಕ್ಕಳು !

ದಯವಿಟ್ಟು ಈ ಗೋಡೆಗೆ ಮಾತ್ರ ಮೂತ್ರ ಮಾಡಬೇಡಿ ! ಬೇರೆ ಏನಾದರು ಬೈಗುಳಗಳು ಸರಿ, ಸೊಳ್ಳೆ ಮಕ್ಕಳು ಎಂದು ಯಾಕೆ ಕರೆಸಿಕೊಳ್ಳುವುದು ?!!!


ಬಾಡಿಗೆಗೆ !

ಈಗಿನ ಕಾಲದಲ್ಲಿ ಎಲ್ಲವೂ ಬಾಡಿಗೆಗೆ ದೊರೆಯುತ್ತದೆ ! ತಂದೆ ತಾಯಿಯ ಆಶೀರ್ವಾದ ಕೂಡ.. ದಯವಿಟ್ಟು ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿರಿ.. ಆದರೆ ಇಲ್ಲಿ ಸಿಗುವುದು ಅಶೀರ್ವಾದವೋ ಅಥವಾ ಅರ್ಶೀವಾದವೋ ಎಂಬುದು ಮಾತ್ರ ತಿಳಿಯಲಿಲ್ಲ !


ದಾರಿ ತಪ್ಪಿದ ಮಗ !

ಇಲ್ಲಾರೋ ದಾರಿ ತಪ್ಪಿದ ಮಗ ಚಿತ್ರದಿಂದ ಪ್ರೇರಿತರಾಗಿ, ಬೇರೆಯವರಿಗೂ ದಾರಿ ತಪ್ಪಿಸುತ್ತಿದ್ದಾರೆ !
ಚಿನ್ಹೆ ನೋಡಿ ಬಲಕ್ಕೆ ಹೋಗಬೇಕೋ ಅಥವಾ ಸೂಚನೆಯ ಪ್ರಕಾರ ಎಡಗಡೆ ಹೋಗಬೇಕೋ ?
ದಾರಿ ಕಾಣದಾಗಿದೆ ರಾಘವೇಂದ್ರನೆ !!!
ಕನ್ನಡ ಕಲಿಸಿ (ನಮ್ಮನ್ನು) ಉಳಿಸು ಬಾ ಯೋಗಿವರ್ಯನೆ !!!



ಭಾರತದ ಪೂಜಾರಿ ?

ಭಾರತದ ಪೂಜಾರಿ ?
ಇವರು ಭಾರತದ ಪೂಜಾರಿಯೋ ಅಥವಾ ಭಾರತಕ್ಕೆ ಸೇರಿದ ಪೂಜಾರಿಯೋ !! ಇವರು ಇರುವುದು ಎಲ್ಲಿ? ಅಮೆರಿಕದಲ್ಲಾ?


Thursday, July 22, 2010

ಆಯಿಸ ಕ್ರೀಂ ?!

ಇದು ಯಾವ ಸೀಮೆ ಐಸ್ ಕ್ರೀಂ ??


ಅರ್ಥ ಮೂವರ್ಸ ??!!

ಇಲ್ಲೊಬ್ಬರು ಅರ್ಥವನ್ನೇ ಬದಲಾಯಿಸುವವರು ಇದ್ದಾರೆ..



Monday, June 21, 2010

ಇಚ್ಚೆ !!

ಇಲ್ಲೊಬ್ಬರು ಊಟ ಮಾಡದೆ ತಮ್ಮ " ಇಚ್ಚೆ "ಯನ್ನು ವ್ಯಕ್ತಪಡಿಸಿದ್ದಾರೆ !




ಅವರಿಗೆ ಯಾವ " ಇಚ್ಛೆ "ಯು ಇರಬಹುದು ? ಊಟ ಮಾಡದೆ ಇದ್ದದ್ದರಿಂದ ಮಹಾಪ್ರಾಣ ಬರಲಿಲ್ಲ ಅನಿಸುತ್ತಿದೆ !
ಹೇಗೂ ಅದರ ಮಾಲೀಕರ ಹೋಟೆಲ್ ಇತ್ತಲ್ಲವೇ ?

ಸಿರ್ಕನ್ !!

ಹಲಸೂರಿನಲ್ಲಿ ಇನ್ನು ವಿಚಿತ್ರವಾದ ಫಲಕವೊಂದನ್ನು ಕಂಡೆ...

" ಪೊಟ್ಟ್ ಸಿರ್ಕನ್ "

ಆಂಗ್ಲಭಾಷೆಯಲ್ಲಿ ಅದೇನು ಗೊತ್ತೇ ?

" ಫೋಟೋ ಸ್ಕ್ರೀನ್ " !! (Photo Screen)

ಕಂಟ್ರಕರುಗಳು...

ಮೊನ್ನೆ ಹೊರವರ್ತುಲ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಕಂಡ ಫಲಕ ... ಇದು ಹೆಬ್ಬಾಳ ಕಡೆಯಿಂದ ಬರುವಾಗ ನಾಗವಾರ ವೃತ್ತದಲ್ಲಿ ಕಂಡದ್ದು..

"ಬಿಲಿಂಡ್ಗ ಡಿಮೊಲೀಶನ್ ಕಂಟ್ರಕರ್ಸ್"...

ಅದನ್ನೇ ಅಂಗ್ಲಭಾಷೆಯಲ್ಲಿ ಹೀಗೆ ಬರೆದಿದ್ದರು...

"Building Demolition Contractors"

ನೀವೇ ಯೋಚಿಸಿ.. ನಾನು ಅಲ್ಲಿ ಅಳಬೇಕಿತ್ತೋ ನಗಬೇಕಿತ್ತೋ !!
ಮೊಟ್ಟಮೊದಲನೆಯ ಪತ್ರದಲ್ಲಿ....

ನನಗೆ ಒಂದು ಮದುವೆಯ ಕರೆಯೋಲೆ ಬಂದಿತು.. ಅದರಲ್ಲಿನ ಕೆಲವು ಪದಗಳನ್ನು ಕಂಡು ನನಗೆ ಸಿಟ್ಟು ಮತ್ತು ನಗೆ ಎರಡೂ ಒಂದೇ ಬಾರಿಗೆ ಬಂದವು !

ಬೆಳ್ಳಂದೂರಿನ ಒಂದು ವಸತಿಗೃಹ ಸಮುಚ್ಚಯದ ಹೆಸರು ನೋಡಿ..

"ಪರ್ಲ್ ಡ್ರಾಪ್ಸ್ ಆಫಾರ್ಟ್ಮೆಂಟ್ "

ಇವರಿಗೆ "" ಮತ್ತು "" ನಡುವಿನ ವ್ಯತ್ಯಾಸವು ತಿಳಿಯದೆ?

ಅದರಲ್ಲೇ ಮುಂದೆ "ವಧುವರರನ್ನು ಅರ್ಶೀವದಿಸಬೇಕಾಗಿ ಕೋರುತ್ತೇನೆ" ಎಂದಿತ್ತು.. ವಧುವರರನ್ನು ಅಶೀರ್ವದಿಸಬೇಕೋ ಅಥವಾ ಅರ್ಶೀವದಿಸಬೇಕೋ ಅರ್ಥವಾಗದೆ ಮನೆಯಲ್ಲೇ ಉಳಿದುಬಿಟ್ಟೆ...

ಸಿರಿಗನ್ನಡಂ ಗಲ್ಲಿಗೆ....

ಕನ್ನಡಿಗರಿಗೆ ನಮಸ್ಕಾರ,

ಇದೆಂಥ ಬ್ಲಾಗ್ ಎಂದು ಅಚ್ಚರಿಯೇ? ಹೌದು ಸ್ವಾಮಿ.. ಇಂಥದ್ದೊಂದು ಬ್ಲಾಗ್ ನಮಗೆ ಬೇಕು.. ನನ್ನ ಮಂತ್ರ "ಸಿರಿಗನ್ನಡಂ ಗೆಲ್ಗೆ". ಆದರೆ ಇಲ್ಲಿ ನಾನು ಕನ್ನಡವೇ ಉಸಿರಾಗಿರುವ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಂಡ ಕನ್ನಡ ಫಲಕಗಳು, ಕರೆಯೋಲೆಗಳು ಕರಪತ್ರಗಳು ಮುಂತಾದವುಗಳಲ್ಲಿ ಕಂಡ ತಪ್ಪುಗಳ ಬಗ್ಗೆ ಬರೆಯುತ್ತೇನೆ. ನಮ್ಮ ರಾಜ್ಯದ ರಾಜಧಾನಿಯಲ್ಲಿ ನಡೆಯುತ್ತಿರುವ ಕನ್ನಡದ ಕಗ್ಗೊಲೆಯ ಬಗ್ಗೆ ಬರೆಯುತ್ತೇನೆ.. ಎಲ್ಲಿಯವರೆಗೆ ಈ ರೀತಿಯ ಕಗ್ಗೊಲೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ

"ಸಿರಿಗನ್ನಡಂ ಗಲ್ಲಿಗೆ"...