Monday, June 21, 2010

ಇಚ್ಚೆ !!

ಇಲ್ಲೊಬ್ಬರು ಊಟ ಮಾಡದೆ ತಮ್ಮ " ಇಚ್ಚೆ "ಯನ್ನು ವ್ಯಕ್ತಪಡಿಸಿದ್ದಾರೆ !




ಅವರಿಗೆ ಯಾವ " ಇಚ್ಛೆ "ಯು ಇರಬಹುದು ? ಊಟ ಮಾಡದೆ ಇದ್ದದ್ದರಿಂದ ಮಹಾಪ್ರಾಣ ಬರಲಿಲ್ಲ ಅನಿಸುತ್ತಿದೆ !
ಹೇಗೂ ಅದರ ಮಾಲೀಕರ ಹೋಟೆಲ್ ಇತ್ತಲ್ಲವೇ ?

ಸಿರ್ಕನ್ !!

ಹಲಸೂರಿನಲ್ಲಿ ಇನ್ನು ವಿಚಿತ್ರವಾದ ಫಲಕವೊಂದನ್ನು ಕಂಡೆ...

" ಪೊಟ್ಟ್ ಸಿರ್ಕನ್ "

ಆಂಗ್ಲಭಾಷೆಯಲ್ಲಿ ಅದೇನು ಗೊತ್ತೇ ?

" ಫೋಟೋ ಸ್ಕ್ರೀನ್ " !! (Photo Screen)

ಕಂಟ್ರಕರುಗಳು...

ಮೊನ್ನೆ ಹೊರವರ್ತುಲ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಕಂಡ ಫಲಕ ... ಇದು ಹೆಬ್ಬಾಳ ಕಡೆಯಿಂದ ಬರುವಾಗ ನಾಗವಾರ ವೃತ್ತದಲ್ಲಿ ಕಂಡದ್ದು..

"ಬಿಲಿಂಡ್ಗ ಡಿಮೊಲೀಶನ್ ಕಂಟ್ರಕರ್ಸ್"...

ಅದನ್ನೇ ಅಂಗ್ಲಭಾಷೆಯಲ್ಲಿ ಹೀಗೆ ಬರೆದಿದ್ದರು...

"Building Demolition Contractors"

ನೀವೇ ಯೋಚಿಸಿ.. ನಾನು ಅಲ್ಲಿ ಅಳಬೇಕಿತ್ತೋ ನಗಬೇಕಿತ್ತೋ !!
ಮೊಟ್ಟಮೊದಲನೆಯ ಪತ್ರದಲ್ಲಿ....

ನನಗೆ ಒಂದು ಮದುವೆಯ ಕರೆಯೋಲೆ ಬಂದಿತು.. ಅದರಲ್ಲಿನ ಕೆಲವು ಪದಗಳನ್ನು ಕಂಡು ನನಗೆ ಸಿಟ್ಟು ಮತ್ತು ನಗೆ ಎರಡೂ ಒಂದೇ ಬಾರಿಗೆ ಬಂದವು !

ಬೆಳ್ಳಂದೂರಿನ ಒಂದು ವಸತಿಗೃಹ ಸಮುಚ್ಚಯದ ಹೆಸರು ನೋಡಿ..

"ಪರ್ಲ್ ಡ್ರಾಪ್ಸ್ ಆಫಾರ್ಟ್ಮೆಂಟ್ "

ಇವರಿಗೆ "" ಮತ್ತು "" ನಡುವಿನ ವ್ಯತ್ಯಾಸವು ತಿಳಿಯದೆ?

ಅದರಲ್ಲೇ ಮುಂದೆ "ವಧುವರರನ್ನು ಅರ್ಶೀವದಿಸಬೇಕಾಗಿ ಕೋರುತ್ತೇನೆ" ಎಂದಿತ್ತು.. ವಧುವರರನ್ನು ಅಶೀರ್ವದಿಸಬೇಕೋ ಅಥವಾ ಅರ್ಶೀವದಿಸಬೇಕೋ ಅರ್ಥವಾಗದೆ ಮನೆಯಲ್ಲೇ ಉಳಿದುಬಿಟ್ಟೆ...

ಸಿರಿಗನ್ನಡಂ ಗಲ್ಲಿಗೆ....

ಕನ್ನಡಿಗರಿಗೆ ನಮಸ್ಕಾರ,

ಇದೆಂಥ ಬ್ಲಾಗ್ ಎಂದು ಅಚ್ಚರಿಯೇ? ಹೌದು ಸ್ವಾಮಿ.. ಇಂಥದ್ದೊಂದು ಬ್ಲಾಗ್ ನಮಗೆ ಬೇಕು.. ನನ್ನ ಮಂತ್ರ "ಸಿರಿಗನ್ನಡಂ ಗೆಲ್ಗೆ". ಆದರೆ ಇಲ್ಲಿ ನಾನು ಕನ್ನಡವೇ ಉಸಿರಾಗಿರುವ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಂಡ ಕನ್ನಡ ಫಲಕಗಳು, ಕರೆಯೋಲೆಗಳು ಕರಪತ್ರಗಳು ಮುಂತಾದವುಗಳಲ್ಲಿ ಕಂಡ ತಪ್ಪುಗಳ ಬಗ್ಗೆ ಬರೆಯುತ್ತೇನೆ. ನಮ್ಮ ರಾಜ್ಯದ ರಾಜಧಾನಿಯಲ್ಲಿ ನಡೆಯುತ್ತಿರುವ ಕನ್ನಡದ ಕಗ್ಗೊಲೆಯ ಬಗ್ಗೆ ಬರೆಯುತ್ತೇನೆ.. ಎಲ್ಲಿಯವರೆಗೆ ಈ ರೀತಿಯ ಕಗ್ಗೊಲೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ

"ಸಿರಿಗನ್ನಡಂ ಗಲ್ಲಿಗೆ"...